ಕರ್ನಾಟಕ ಸಕಾಲ ಸೇವೆಗಳ ವ್ಯವಸ್ಥೆಗೆ ಸುಸ್ವಾಗತ ,             ಸಕಾಲ ಆನ್ ಲೈನ್ ಸೇವೆಗಳು,                                    ಸಕಾಲ ದೂರುಗಳು
ಪ್ರಶ್ನೆಗಳು
1
ನಾಗರಿಕ ಸೇವಾ ಖಾತರಿ ಅಧಿನಿಯಮ ಎಂದರೇನು?
             ಕರ್ನಾಟಕ ರಾಜ್ಯದಲ್ಲಿ, ಅನುಸೂಚಿಯಲ್ಲಿ ಉಲ್ಲೇಖಿಸಿದ ನಾಗರಿಕ ಸಂಬಂಧಿತ ಸೇವೆಗಳಿಗಾಗಿ ನಿಗದಿತ ಕಾಲದೊಳಗೆ ನಾಗರಿಕರಿಗೆ ಸೇವಾ ಖಾತರಿಯನ್ನು ಒದಗಿಸಲು ೨೦೧೧ನೇ ಡಿಸೆಂಬರ್ರ್ನಲ್ಲಿ ಕರ್ನಾಟಕ
            ವಿಧಾನಮಂಡಲವು ಸರ್ವಾನುಮತದಿಂದ ಅಂಗೀಕರಿಸಿದ ಒಂದು ಅಧಿನಿಯಮ ಇದಾಗಿದೆ
.
2
ಅದು ನನಗೆ ಹೇಗೆ ಸಹಾಯವಾಗುತ್ತದೆ?
      
       ಈ ಅಧಿನಿಯಮವು, ಅಧಿನಿಯಮದಲ್ಲಿ ಹೇಳಲಾದ ನಾಗರಿಕ ಸೇವೆಗಳನ್ನು ನಿಗದಿತ ಕಾಲದೊಳಗೆ ಪಡೆಯಲು ನಿಮಗೆ ಸಹಾಯ ಮಾಡುತ್ತದೆ. ನೀವು ಸೇವೆಯನ್ನು ಕೋರಿದಾಗ, ನೀವು ಸಕಾಲ
                ಸಂಖ್ಯೆಯೊಂದಿಗೆ ರಸೀತಿ ಅಥವಾ ಹಿಂಬರಹವನ್ನು ಪಡೆಯುತ್ತೀರಿ. ಇದು, ಸೇವೆಗಾಗಿನ ನಿಮ್ಮ ಕೋರಿಕೆಯನ್ನು ನಿರ್ದಿಷ್ಟಪಡಿಸಿದ ದಿನಗಳೊಳಗಾಗಿ ಪರಿಶೀಲಿಸಲಾಗುತ್ತದೆ ಎಂಬ ಭರವಸೆಯನ್ನು
                ಖಚಿತಪಡಿಸುತ್ತದೆ. ಸಕಾಲ ಸಂಖ್ಯೆಯೊಂದಿಗೆ ನೀವು ಈ ವೆಬಸೈಟನಲ್ಲಿ ನಿಮ್ಮ ಅರ್ಜಿಯ ಸ್ಥಿತಿಗತಿಯನ್ನು ತಿಳಿಯಬಹುದು. ನೀವು ನಿಮ್ಮ ಮೊಬೈಲ್ ನಿಂದ ಎಸ್ಎಂಎಸ್ ಕಳುಹಿಸುವುದರ ಮೂಲಕವೂ
                ಸಹ ನಿಮ್ಮ ಅರ್ಜಿಯ ಸ್ಥಿತಿಗತಿಯನ್ನು ಪರಿಶೀಲಿಸಬಹುದು. ಒಂದು ವೇಳೆ, ನಿಮ್ಮ ಅರ್ಜಿಯು ತಿರಸ್ವ್ಬ್ರತವಾದರೆ ಅಥವಾ ಸೇವೆಯನ್ನು ನಿಗದಿತ ಕಾಲದೊಳಗೆ ಒದಗಿಸದಿದ್ದರೆ, ನೀವು ನಿಮ್ಮ ಕುಂದುಕೊರತೆಗಳ
               ಪರಿಹಾರಕ್ಕಾಗಿ ಮುಂದಿನ ಅಧಿಕಾರಿಗೆ ಒಂದು ಅಪೀಲನ್ನು ಸಲ್ಲಿಸಬಹುದು.

3
ವೆಬಸೈಟ ಮೂಲಕ ನಾನು ಏನನ್ನು ಪಡೆಯಬಹುದು?
           
ಸಕಾಲ ವೆಬಸೈಟ ಅಂದರೆ www.kgsc.kar.nic.inರಲ್ಲಿ ನೀವು ಸಕಾಲ ಅಧಿನಿಯಮದ ಬಗ್ಗೆ ಮಾಹಿತಿ, ಇಲಾಖೆಗಳ ಬಗ್ಗೆ ಮಾಹಿತಿ ಮತ್ತು ಈ ಪ್ರತಿಯೊಂದು ಇಲಾಖೆಗಳಲ್ಲಿ ಒದಗಿಸುವ ಸೇವೆಗಳು ಮತ್ತು
               ಸೇವೆಗಾಗಿನ  ಕೋರಿಕೆಯನ್ನು ಪರಿಶೀಲಿಸಲು ರೂಪಿಸಿದ ನಮೂನೆಗಳು ಮತ್ತು ಕಾರ್ಯವಿಧಾನದ ಬಗ್ಗೆ ಮಾಹಿತಿಯನ್ನು ಪಡೆಯಬಹುದು. ನೀವು, ನಿಮ್ಮ ಅರ್ಜಿಯನ್ನು ಸಲ್ಲಿಸಿದ ಸಮಯದಲ್ಲಿ ನಿಮಗೆ ನೀಡಿದಂಥ
               ಸಕಾಲ ಸಂಖ್ಯೆಯ ಸಹಾಯದಿಂದ ನಿಮ್ಮ ಸೇವಾ ಕೋರಿಕೆಯ ಪರಿಸ್ಥಿತಿಯನ್ನು ಗುರುತಿಸಬಹುದು.

4
ಸಕ್ಷಮ ಅಧಿಕಾರಿ ಯಾರು?
      
      ‘ಸಕ್ಷಮ ಅಧಿಕಾರಿ’ಯು ಸರ್ಕಾರದಿಂದ ನೇಮಿಸಲ್ಪಟ್ಟ ಒಬ್ಬ ಅಧಿಕಾರಿಯಾಗಿದ್ದು, ಅವರು ಸೇವೆಯಲ್ಲಿನ ಕುಂದುಕೊರತೆಗಳನ್ನು ಪರಿಹರಿಸಲು ಮತ್ತು ಸೇವೆಯನ್ನು ಒದಗಿಸುವಲ್ಲಿ ತಪ್ಪು ಅಥವಾ ವಿಳಂಬ ಮಾಡಿದ
               ಸಾರ್ವಜನಿಕ ನೌಕರನಿಗೆ ಪರಿಹಾರಾತ್ಮಕ ವೆಚ್ಚವನ್ನು ವಿಧಿಸಲು ಅಧಿಕಾರ ಹೊಂದಿರತಕ್ಕದು. ಸಕ್ಷಮ ಅಧಿಕಾರಿಯು ಯಾವುದೇ ನಿಯೋಜಿತ ಅಧಿಕಾರಿ ನೀಡಿದ ಆದೇಶದ ವಿರುದ್ಧ ಸಲ್ಲಿಸುವ ಅಪೀಲನ್ನು ವಿಚಾರಣೆ
               ಮಾಡುವ ಅಧಿಕಾರವನ್ನು ಹೊಂದಿರತಕ್ಕದ್ದು.

5
ಅಪೀಲು ಪ್ರಾಧಿಕಾರಿ ಯಾರು?
           
ಅಪೀಲು ಪ್ರಾಧಿಕಾರಿ ಎಂದರೆ ಸರ್ಕಾರದಿಂದ ನೇಮಿಸಲ್ಪಟ್ಟ ಒಬ್ಬ ಅಧಿಕಾರಿಯಾಗಿದ್ದು, ಅವರು ಯಾವುದೇ ಸಕ್ಷಮ ಅಧಿಕಾರಿ ನೀಡಿದ ಆದೇಶದ ವಿರುದ್ಧ ಸಲ್ಲಿಸುವ ಅಪೀಲನ್ನು ವಿಚಾರಣೆ ಮಾಡುವ ಅಧಿಕಾರವನ್ನು
                ಹೊಂದಿರುತ್ತಾರೆ.

6
ಅಧಿನಿಯಮದಲ್ಲಿ ಪಟ್ಟಿ ಮಾಡಿದ ಸೇವೆಗಳನ್ನು ನಿಗದಿತ ಕಾಲದೊಳಗೆ ಪಡೆಯದಿದಾರೆ ನಾನು ಏನು ಮಾಡಬೇಕು?
           
ಸೇವೆಗಳಲ್ಲಿ ಯಾವುದೇ ಒಂದನ್ನಾಗಲೀ ಒದಗಿಸಲು ವಿಳಂಬವಾದರೆ ಅಥವಾ ತಪ್ಪಾದರೆ ಅಥವಾ ಸೇವೆಯನ್ನು ತಿರಸ್ಕರಿಸಿದರೆ, ಆಗ ನೀವು ಅರ್ಜಿಕ್ರಯನ್ನು ಸಲ್ಲಿಸಿದ ಸಮಯದಲ್ಲಿ ನೀವು ಪಡೆದ ಹಿಂಬರಹದ
                ಆಧಾರದ ಮೇಲೆ ನಿರ್ದಿಷ್ಟ ಕಾಲದೊಳಗೆ ಸಕ್ಷಮ ಪ್ರಾಧಿಕಾರಿಗೆ ಒಂದು ಅಪೀಲನ್ನು ಸಲ್ಲಿಸಬಹುದು. ಸಕ್ಷಮ ಪ್ರಾಧಿಕಾರಿಯು ನಿರ್ದಿಷ್ಟ ಕಾಲದೊಳಗೆ ಅಪೀಲನ್ನು ವಿಚಾರಣೆ ಮಾಡುವರು ಮತ್ತು
               ಕುಂದುಕೊರತೆಯನ್ನು ಪರಿಹರಿಸುವರು. ಸೇವೆಯನ್ನು ನಿಗದಿತ ಕಾಲದೊಳಗೆ ಒದಗಿಸಲು ವಿಫಲವಾದುದಕ್ವಾಗಿ ನೀವು ಸಕ್ಷಮ ಪ್ರಾಧಿಕಾರಿಯಿಂದ ಪರಿಹಾರಾತ್ಮಕ ವೆಚ್ಚವನ್ನು ಕ್ಲೆಮು ಮಾಡಬಹುದು. ನಿಯೋಜಿತ
               ಅಧಿಕಾರಿಯು ಅನುಚಿತ ವಿಳಂಬ ಮಾಡಿದರೆ, ನಿಯೋಜಿತ ಅಧಿಕಾರಿಯು ತಮ್ಮ ವೇತನದಿಂದ ಪರಿಹಾರಾತ್ಮಕ ವೆಚ್ಚ ಪಾವತಿಸಲು ಗುರಿಯಗತಕ್ಕದ್ದು.

8
ನನ್ನ ಸೇವಾ ಕೋರಿಕೆಯನ್ನು ನಿಯೋಜಿತ ಅಧಿಕಾರಿಯು ತಿರಸ್ಕರಿಸಿದರೆ ನಾನು ಏನು ಮಾಡಬಹುದು?
       
ನಿಮ್ಮ ಸೇವಾ ಕೋರಿಕೆಯನ್ನು ನಿಯೋಜಿತ ಅಧಿಕಾರಿಯು ತಿರಸ್ಕರಿಸಿದರೆ ಮತ್ತು ತಿರಸ್ವರಣೆಗಾಗಿ, ನಿಯೋಜಿತ ಅಧಿಕಾರಿಯು ನೀಡಿದ ಕಾರಣಗಳು ನಿಮಗೆ ಮನವರಿಕೆ ಆಗದಿದಾರೆ, ಆಗ ನೀವು, ಅರ್ಜಿ
               ತಿರಸ್ಕೈತವಾದ ದಿನಾಅಕದಿಂದ ನಿರ್ದಿಷ್ಟಪಡಿಸಲಾದ ಕಾಲಮಿತಿಯೊಳಗೆ ಸಕ್ಷಮ ಪ್ರಾಧಿಕಾರಿಗೆ ಅಪೀಲು ಸಲ್ಲಿಸಬಹುದು.

11
ಸೇವೆಯ ವಿರುದ್ಧ ಹೇಗೆ ಮತ್ತು ಎಲ್ಲಿ ನಾನು ಅಪೀಲು ಸಲ್ಲಿಸಬಹುದು?
               ನಿಯೋಜಿತ ಅಧಿಕಾರಿಯ ತೀರ್ಮಾನದಿಂದ ನಿಮಗೆ ಸಮಾದಾನ ಆಗದಿದ್ದರೆ, ಆಗ, ನೀವು, ತೀರ್ಮಾನವನ್ನು ಕೈಗೊಂಡ ದಿನಾಅಕದಿಂದ ೩೦ ದಿನಗಳೊಳಗೆ ಸಕ್ಷಮ ಪ್ರಾಧಿಕಾರಿಗೆ ಅಪೀಲನ್ನು ಸಲ್ಲಿಸಬಹುದು.
               ಸಕ್ಷಮ ಪ್ರಾಧಿಕಾರಿಯ ಆದೇಶವನ್ನು ನೀವು ಒಪ್ಪದಿದ್ದ ಪಕ್ಷದಲ್ಲಿ, ನೀವು, ಸಕ್ಷಮ ಪ್ರಾಧಿಕಾರಿಯು ತೀರ್ಮಾನವ ನ್ನು ನೀಡಿದ ದಿನಾಂಕದಿಂದ ೩೦ ದಿನಗಳೊಳಗೆ ಎರಡನೇ ಅಪೀಲು ಎಂಬುದಾಗಿ ಅಪೀಲು
               ಪ್ರಾಧಿಕಾರಕ್ಕೆ ಅಪೀಲು ಸಲ್ಲಿಸಬಹುದು.

12
ಸೇವೆಯನ್ನು ಪಡೆಯಲು ಕಾರ್ಯವಿಧಾನ ಏನು?
           
ಸೇವೆಯನ್ನು ಪಡೆದುಕೊಳ್ಳುವ ಕಾರ್ಯವಿಧಾನವು, ಸೇವೆಯಿಂದ ಸೇವೆಗೆ ವ್ಯತ್ಯಾಸವಿರುತ್ತದೆ. ಆದ್ದರಿಂದ ಸೇವೆಯ ನ್ನು ಪಡೆದುಕೊಳ್ಳುವ ಕಾರ್ಯವಿಧಾನದ ವಿವರಗಳಿಗೆ, ಈ ವೆಬಸೈಟನ ಮುಖ್ಯಪುಟದಲ್ಲಿ
                ಲಭ್ಯವಿರುವ ನಮೂನೆಗಳು ಮತ್ತು ಕಾರ್ಯವಿಧಾನ ಎಂಬುದನ್ನು ಕ್ಲಿಕ್ ಮಾಡಿ ಮತ್ತು ನೀವು ಕಾರ್ಯವಿಧಾನವನ್ನು ನೋಡಲು ಇಚ್ಷಿಸುವಂಥ ಇಲಾಖೆ ಮತ್ತು ಸೇವೆಗಾಗಿ ಎಂಬುದನ್ನು ಆಯ್ಕೆಮಾಡಿ, ಸೇವೆ
               ದೊರೆಯುವ ಕಾರ್ಯವಿಧಾನವು ಪ್ರದರ್ಶನವಾಗುತ್ತದೆ.

13
ನನ್ನ ಸೇವೆ ಪಡೆದುಕೊಳಲು ಯಾವ ದಸ್ತಾವೇಜುಗಳನ್ನು ಲಗತ್ತಿಸಬೇಕು ಅಥವಾ ಸಂದಾಯ ಮಾಡಬೇಕಾದ ಶುಲ್ಕಗಳು ಎಷ್ಷು?
           
ಲಗತ್ತಿಸಬೇಕಾದ ದಸ್ತಾವೇಜುಗಳು ಅಥವಾ ಸಂದಾಯ ಮಾಡಬೇಕಾದ ಶುಲ್ಕಗಳು ಸೇವೆಯಿಂದ ಸೇವೆಗೆ ವ್ಯತ್ಯಾಸವಿರುತ್ತವೆ. ಆದ್ದರಿಂದ ಪ್ರತಿ ಸೇವೆಗೆ ಲಗತ್ತಿಸಬೇಕಾದ ದಸ್ತಾವೇಜುಗಳು ಮತ್ತು
                ಸಲ್ಲಿಸಬೇಕಾದ ಶುಲ್ಕಗಳ ಮಾಹಿತಿಗೆ, ವೆಬಸೈಟನಲ್ಲಿ ‘ಸೇವೆ ಮತ್ತು ಕಾರ್ಯವಿಧಾನ’ ಆಯ್ಕೆಯನ್ನು ಪರೀಕ್ಷಿಸಿ.