ಉನ್ನತ ಶಿಕ್ಷಣ ಗುಣಮಟ್ಟವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ (MHRD) ಮಹತ್ವಾಕಾಂಕ್ಷಿ ಯೋಜನೆಯಾದ ರಾಷ್ಟ್ರೀಯ ಉಚ್ಛತರ್ ಶಿಕ್ಷಾ ಅಭಿಯಾನ್ (ರೂಸಾ) ಯೋಜನೆಯು 2013ರಲ್ಲಿ 12ನೇ ಪಂಚವಾರ್ಷಿಕ ಯೋಜನೆಯಲ್ಲಿ ಚಾಲನೆಗೊಂಡಿದ್ದು, ಎಲ್ಲಾ ಉನ್ನತ ವಿದ್ಯಾ ಸಂಸ್ಥೆಗಳಿಗೆ ಸಮಾನ ಅಭಿವೃದ್ದಿ ಒದಗಿಸಲು ಮತ್ತು ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ದೌರ್ಬಲ್ಯಗಳನ್ನು ಸರಿಪಡಿಸುವುದು, ದೇಶಾದ್ಯಂತ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಆಯಾ ಕಟ್ಟಿನ ಹಣ ಒದಗಿಸುವುದು, ಈ ಯೋಜನೆಯ ಗುರಿಯಾಗಿರುತ್ತದೆ. ರೂಸಾ ಅನುದಾನವನ್ನು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಒದಗಿಸುತ್ತದೆ.

ರೂಸಾ ಯೋಜನೆಯ ಕಾಂಪೋನೆಂಟ್-7(
Infrastructure Grants to Colleges) ರಡಿಯಲ್ಲಿ, ಕಾಲೇಜು ಶಿಕ್ಷಣ ಇಲಾಖಾ ವ್ಯಾಪ್ತಿಯಲ್ಲಿನ 2015-16ನೇ ಸಾಲಿನಲ್ಲಿ 6ನೇ ಪಿಎಬಿಯಲ್ಲಿ 60 ಹಾಗೂ 9ನೇ ಪಿಎಬಿಯಲ್ಲಿ 30 ಕಾಲೇಜುಗಳು ಒಟ್ಟು 90 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು ಇದುವರೆವಿಗೂ ಆಯ್ಕೆಗೊಂಡಿರುತ್ತದೆ. ಸದರಿ ಕಾಂಪೋನೆಂಟ್-7ರಡಿಯಲ್ಲಿ ಆಯ್ಕೆಯಾದ ಕಾಲೇಜುಗಳಿಗೆ ತಲಾ ರೂ.2.00 ಕೋಟಿ ಅನುದಾನ ನಿಗದಿಪಡಿಸಲಾಗಿದ್ದು, ಇದರಲ್ಲಿ 6ನೇ ಪಿಎಬಿಯಲ್ಲಿ ಆಯ್ಕೆಗೊಂಡ ಕಾಲೇಜುಗಳಿಗೆ ಮೊದಲನೇ ಕಂತಿನ ಅನುದಾನವಾಗಿ ರೂ.57,11,538 ಹಾಗೂ 9ನೇ ಪಿಎಬಿಯಲ್ಲಿ ಆಯ್ಕೆಗೊಂಡ ರೂ.99,00,000 ಲಕ್ಷಗಳ ಅನುದಾನ ಇದುವರೆವಿಗೂ ಬಿಡುಗಡೆಯಾಗಿರುತ್ತದೆ. ಒಟ್ಟು ಇದುವರೆವಿಗೂ 2015-16ನೇ ಸಾಲಿನಲ್ಲಿ ರೂಸಾ ಯೋಜನೆಯಡಿ ಆಯ್ಕೆಗೊಂಡ ಮೇಲ್ಕಂಡ 90 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ಕೇಂದ್ರ ಸರ್ಕಾರದಿಂದ    ರೂ.63,96,92,280 ಗಳ ಅನುದಾನ ಬಿಡುಗಡೆಯಾಗಿರುತ್ತದೆ. 

ಕಾಂಪೋನೆಂಟ್-7ರಡಿಯಲ್ಲಿ ಕೇಂದ್ರ ಸರ್ಕಾರದಿಂದ ಬಿಡುಗಡೆಯಾಗಿರುವ ರೂ.63,96,92,280 ಗಳಲ್ಲಿ ಇದುವರೆವಿಗೂ ರೂ.60.00 ಕೋಟಿಗಳಷ್ಟು ಅನುದಾನವನ್ನು ಕಾಲೇಜುಗಳಿಗೆ ಬಿಡುಗಡೆಗೊಳಿಸಿಲಾಗಿದೆ ಹಾಗೂ ರೂಸಾ ಯೋಜನೆಯಡಿ ಆಯ್ಕೆಯಾದ 89 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 87 ಕಾಲೇಜುಗಳಲ್ಲಿ ಕಾಂಪೋನೆಂಟ್-7ರಡಿಯಲ್ಲಿ ಐಸಿಟಿ ಉಪಕರಣಗಳನ್ನು ಅಳವಡಿಸಿ ಬಳಕೆ ಮಾಡಲಾಗುತ್ತಿದೆ. ಸದರಿ ಕಾಲೇಜುಗಳಲ್ಲಿ ಸ್ಮಾರ್ಟ್‍ಕ್ಲಾಸ್ ತರಗತಿಗಳನ್ನು ನಡೆಸಲಾಗುತ್ತಿದೆ ಹಾಗೂ ಇಲ್ಲಿಯವರೆವಿಗೂ 84 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ಕಾಂಪೋನೆಂಟ್-7 ಅಡಿಯಲ್ಲಿ ಮೂಲಭೂತ ಸೌಕರ್ಯ ಕಲ್ಪಿಸುವ ಸಂಬಂಧ ನೂತನ ಕಟ್ಟಡ ಕಾಮಗಾರಿಗಾಗಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿದ್ದು, ಕಾಮಗಾರಿ ಪ್ರಗತಿಯಲ್ಲಿರುತ್ತದೆ ಹಾಗೂ ಸದರಿ ಅನುದಾನವನ್ನು ಬಳಸಿಕೊಂಡಿರುವ ಬಗ್ಗೆ ಸಂಬಂಧಪಟ್ಟ ಪ್ರಾಂಶುಪಾಲರುಗಳಿಂದ ಬಳಕೆ ಪ್ರಮಾಣ ಪತ್ರ ಪಡೆಯಲಾಗುತ್ತಿದೆ.

ರೂಸಾ ಯೋಜನೆಯ 9ನೇ ಪಿಎಬಿಯಲ್ಲಿ ಕಾಂಪೋನೆಂಟ್-1 (
Upgradation of Autonomous College to University)) ರಡಿಯಲ್ಲಿ ಮಂಡ್ಯ ಸರ್ಕಾರಿ ಸ್ವಾಯತ್ತ ಕಾಲೇಜು, ಆಯ್ಕೆಗೊಂಡಿದ್ದು, ಸದರಿ ಕಾಲೇಜಿಗೆ ರೂ.55.00 ಕೋಟಿ ನಿಗದಿಪಡಿಸಲಾಗಿದ್ದು, ಇದರಲ್ಲಿ ಮೊದಲನೇ ಕಂತಿನ ಅನುದಾನ ರೂ.26,91,56,250 ಗಳು ಬಿಡುಗಡೆಯಾಗಿರುತ್ತದೆ. ಸದರಿ ಕಟ್ಟಡ ಕಾಮಗಾರಿಗಾಗಿ M/sRITES ಸಂಸ್ಥೆ ನೇಮಕಗೊಂಡಿದ್ದು; ನಿರ್ಮಾಣ ಸಂಸ್ಥೆ ಸಲ್ಲಿಸಿದ ಅಂದಾಜು ಪಟ್ಟಿಗೆ ಸರ್ಕಾರದಿಂದ ಆಡಳಿತಾತ್ಮಕ ಅನುಮೋದನೆ ನೀಡಲಾಗಿರುತ್ತದೆ.

     ರೂಸಾ ಯೋಜನೆಯ 9ನೇ ಪಿಎಬಿಯಲ್ಲಿ ಕಾಂಪೋನೆಂಟ್-2 ರಡಿಯಲ್ಲಿ (
Creation of Cluster Colleges to University) ರಡಿಯಲ್ಲಿ ಬೆಂಗಳೂರಿನ ಮಹಾರಾಣಿ ಮಹಿಳಾ ವಿಜಾÐನ ಕಾಲೇಜು, ಮಹಾರಾಣಿ ಮಹಿಳಾ ಕಲಾ ಮತ್ತು ವಾಣಿಜ್ಯ

ನಿರ್ವಹಣಾ ಕಾಲೇಜು, ಹಾಗೂ ಶ್ರೀಮತಿ ವಿ.ಹೆಚ್.ಡಿ.ಕೇಂದ್ರ ಗೃಹ ವಿಜ್ಞಾನ ಕಾಲೇಜು, ಈ ಕಾಲೇಜುಗಳನ್ನು ಕ್ಲಸ್ಟರ್ ವಿಶ್ವವಿದ್ಯಾಲಯವಾಗಿ ಆಯ್ಕೆಯಾಗಿರುತ್ತದೆ. ಸದರಿ ಕಾಲೇಜಿಗೆ ರೂ.55.00 ಕೋಟಿ ನಿಗದಿಪಡಿಸಲಾಗಿದ್ದು, ಇದರಲ್ಲ್ಲಿ ಮೊದಲನೇ ಕಂತಿನ ಅನುದಾನ ರೂ.27,22,50,000 ಗಳು ಬಿಡುಗಡೆಯಾಗಿರುತ್ತದೆ. ಸದರಿ ಕ್ಲಸ್ಟರ್ ವಿಶ್ವವಿದ್ಯಾಲಯದ ಕಟ್ಟಡ ಕಾಮಗಾರಿಗಾಗಿ
M/s RITES Pvt.Ltd ಸಂಸ್ಥೆಯವರು ರೂ.45.69 ಕೋಟಿಗಳಿಗೆ ಅಂದಾಜು ಪಟ್ಟಿಯನ್ನು ತಯಾರಿಸಿ ಸಲ್ಲಿಸಿದ್ದು, ಸದರಿ ಅಂದಾಜು ಪಟ್ಟಿಯನ್ನು ಹಾಗೂ ಕರಡು ಸಚಿವ ಸಂಪುಟ ಟಿಪ್ಪಣಿಯನ್ನು ಸಚಿವ ಸಂಪುಟದ ಅನುಮೋದನೆ ಕೋರಿ ಸರ್ಕಾರಕ್ಕೆ ಸಲ್ಲಿಸಲಾಗಿದೆ.

ರೂಸಾ ಯೋಜನೆಯ 9ನೇ ಪಿಎಬಿಯಲ್ಲಿ ಕಾಂಪೋನೆಂಟ್-5 ರಡಿಯಲ್ಲಿ
Model Degree College(MDC) ಯನ್ನಾಗಿ ಪರಿವರ್ತಿಸಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಜೇವರ್ಗಿ, ಆಯ್ಕೆಯಾಗಿರುತ್ತದೆ.  ಸದರಿ ಕಾಲೇಜಿಗೆ ರೂ.4.00 ಕೋಟಿ ನಿಗದಿಪಡಿಸಲಾಗಿದ್ದು, ಇದರಲ್ಲಿ ಮೊದಲನೇ ಕಂತಿನ ಅನುದಾನ ರೂ.2.00 ಕೋಟಿಗಳು ಬಿಡುಗಡೆಯಾಗಿರುತ್ತದೆ. ಸದರಿ ಕಾಲೇಜಿನ ಕಟ್ಟಡ ಕಾಮಗಾರಿಯನ್ನು PWಆ ಸಂಸ್ಥೆಗೆ ವಹಿಸಿ ಸರ್ಕಾರ ಆದೇಶಿಸಿರುತ್ತದೆ.