ಭಾರತ ಸರ್ಕಾರದ ರಾಷ್ಟ್ರೀಯ ಶಿಕ್ಷಣ ನೀತಿ 1986ರನ್ವಯ ಉನ್ನತ ಶಿಕ್ಷಣದಲ್ಲಿ ಗುಣಮಟ್ಟಕ್ಕೆ ಒತ್ತು ನೀಡಲಾಗಿದೆ. ಇದರನ್ವಯ ಯುಜಿಸಿಯ ಸ್ವಾಯತ್ತ ಸಂಸ್ಥೆಯಾಗಿ ನ್ಯಾಕ್‍ಅನ್ನು 1994ರಲ್ಲಿ ಸ್ಥಾಪಿಸಲಾಗಿದೆ. ಇದರ ಮುಖ್ಯಕಛೇರಿ ಬೆಂಗಳೂರಿನಲ್ಲಿದ್ದು, ಇದರಕಾರ್ಯರಾಷ್ಟ್ರವ್ಯಾಪ್ತಿಯಾಗಿದೆ. ಇದರ ಮುಖ್ಯಕಾರ್ಯಉನ್ನತ ಶಿಕ್ಷಣದಲ್ಲಿ ಗುಣಮಟ್ಟವನ್ನು ವೃದ್ಧಿಸಲು ಅರಿವು ಮೂಡಿಸುವುದು, ನೀತಿ ನಿರೂಪಣೆ ಹಾಗೂ ಮಾರ್ಗೊಪಾಯಗಳ ಮೂಲಕ ಶಿಕ್ಷಣ ಸಂಸ್ಥೆಗಳನ್ನು ಮಾನ್ಯತೆಗೆ ಒಳಪಡಿಸುವುದಾಗಿರುತ್ತದೆ.

2012ರಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಕಡ್ಡಾಯವಾಗಿ ಮಾನ್ಯತೆ ಮಾಡುವ ನಿಯಮವನ್ನು ಯುಜಿಸಿ ಜಾರಿಗೆತಂದಿದೆ. ಇದರನ್ವಯಐದು ವರ್ಷ ಪೂರ್ಣಗೊಳಿಸಿರುವ ಎಲ್ಲಾಉನ್ನತ ಶಿಕ್ಷಣ ಸಂಸ್ಥೆಗಳು ಕಡ್ಡಾಯವಾಗಿ ಮಾನ್ಯತೆ ಒಳಪಡಬೇಕಾಗಿರುತ್ತದೆ. ಇದಲ್ಲದೇ, ಸ್ವಾಯತ್ತತೆ ಪಡೆಯುವುದು ಯು.ಜಿ.ಸಿ, ರೂಸ ಮುಂತಾದವುಗಳಿಂದ ಹಣಕಾಸು ನೆರವು ಪಡೆಯಲು ನ್ಯಾಕ್ ಮ್ಯಾನತೆಕಡ್ಡಾಯವಾಗಿದೆ.

ನ್ಯಾಕ್‍ನಕಾರ್ಯಸೂಚಿಯನ್ವಯ ಕರ್ನಾಟಕದಲ್ಲಿನ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಮಾನ್ಯತೆಗೆ ಅನುವು ಮಾಡಿಕೊಡಲು 2002ರಲ್ಲಿ ರಾಜ್ಯಗುಣಮಟ್ಟ ಭರವಸಾಕೋಶವನ್ನು ಸ್ಥಾಪಿಸಲಾಗಿದೆ. ಯುಜಿಸಿಯು ಕಡ್ಡಾಯ ಮಾನ್ಯತೆಯ ನಿಯಮವನ್ನು 2012ರಲ್ಲಿ ಜಾರಿಗೆತಂದರೂಕರ್ನಾಟಕವು 2002ನೇ ಇಸವಿಯಲ್ಲಿಯೇ ಮಾನ್ಯತೆಯನ್ನುಕಡ್ಡಾಯ ಮಾಡಿದದೇಶದ ಮೊದಲ ರಾಜ್ಯವಾಗಿದೆ.

2013ರ ನಂತರ ಸರ್ಕಾರಿ ಕಾಲೇಜುಗಳನ್ನು ಮಾನ್ಯತೆಗೆ ಒಳಪಡಿಸಲು ಒತ್ತು ನೀಡಲಾಗಿದೆ. ತತ್ಪಲವಾಗಿ ಕರ್ನಾಟಕ  ಹೆಚ್ಚು ಉನ್ನತ ಶಿಕ್ಷಣ ಸಂಸ್ಥೆಗಳನ್ನು ಮಾನ್ಯತೆಗೆ ಒಳಪಡಿಸುವಲ್ಲಿ ಸಫಲವಾಗಿದ್ದು, ಇಡೀದೇಶದಲ್ಲಿಯೇಎರಡನೇ ಸ್ಥಾನವನ್ನು ಹಾಗೂ ದಕ್ಷಿಣ ಭಾರತದಲ್ಲಿ ಮೊದಲ ಸ್ಥಾನವನ್ನು ಹೊಂದಿದೆ. ಪ್ರಸ್ತುತರಾಜ್ಯದ 765 ಸಂಸ್ಥೆಗಳು (ಸರ್ಕಾರ, ಅನುದಾನಿತ ಮತ್ತು ಖಾಸಗಿ) ಮ್ಯಾನತೆಯನ್ನು ಹೊಂದಿವೆ. 412 ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳ ಪೈಕಿ    ಈವರೆಗೆ 222 ಕಾಲೇಜುಗಳು ಮಾನ್ಯತೆ ಹೊಂದಿವೆ. ಸಧ್ಯ ಶೈಕ್ಷಣಿಕ ವರ್ಷದಲ್ಲಿ 25 ಸರ್ಕಾರಿ ಕಾಲೇಜುಗಳನ್ನು ಮಾನ್ಯತೆಗೆ ಒಳಪಡಿಸಲು ಕಾರ್ಯಕ್ರಮವನ್ನುರೂಪಿಸಲಾಗಿದೆ.
1ನೇ ಸೈಕಲ್
ಸರ್ಕಾರಿ ಕಾಲೇಜುಗಳು
2ನೇ ಸೈಕಲ್
ಸರ್ಕಾರಿ ಕಾಲೇಜುಗಳು
3ನೇ ಸೈಕಲ್
ಸರ್ಕಾರಿ ಕಾಲೇಜುಗಳು
ಒಟ್ಟು ಕಾಲೇಜುಗಳು
2002 01
2003 26
2004 38
2005 21
2006 09
2007 10
2008 01
2009 03 14   17
2010 01 05   06
2011 01 14   15
2012 03 07   10
2013 04 12   16
2014 04 12   16
2015 15 22 04 41
2016 46 15 14 75
2017 38 04 07 47
2018 01 0 01  
         
ಎನ್.ಐ.ಸಿ. ಸರ್ವರ್ ಕರ್ನಾಟಕದಲ್ಲಿ ಪ್ರಕಟಿಸಲಾಗಿದೆ
ಬೆಂಗಳೂರು
ರಚನೆ, ವಿನ್ಯಾಸ ಮತ್ತು ನಿರ್ವಹಣೆ
ಮಾಹಿತಿ ತಂತ್ರಜ್ಞಾನ ವಿಭಾಗ, ಆಯುಕ್ತರ ಕಛೇರಿ,
ಕಾಲೇಜು ಶಿಕ್ಷಣ ಇಲಾಖೆ, ಬೆಂಗಳೂರು
ರಚನೆ, ವಿನ್ಯಾಸ ಮತ್ತು ನಿರ್ವಹಣೆ
ಮಾಹಿತಿ ತಂತ್ರಜ್ಞಾನ ವಿಭಾಗ, ಆಯುಕ್ತರ ಕಛೇರಿ,
ಕಾಲೇಜು ಶಿಕ್ಷಣ ಇಲಾಖೆ, ಬೆಂಗಳೂರು
© ಕಾಲೇಜು ಶಿಕ್ಷಣ ಇಲಾಖೆ, ಬೆಂಗಳೂರು - 560 001, ಕರ್ನಾಟಕ ಸರ್ಕಾರ, ಭಾರತ.