1960ಭಾರತ ಸರ್ಕಾರದ ರಾಷ್ಟ್ರೀಯ ಶಿಕ್ಷಣ ನೀತಿ 1986ರನ್ವಯ ಉನ್ನತ ಶಿಕ್ಷಣದಲ್ಲಿ ಗುಣಮಟ್ಟಕ್ಕೆ ಒತ್ತು ನೀಡಲಾಗಿದೆ. ಇದರನ್ವಯ ಯುಜಿಸಿಯ ಸ್ವಾಯತ್ತ ಸಂಸ್ಥೆಯಾಗಿ ನ್ಯಾಕ್ ಅನ್ನು 1994ರಲ್ಲಿ ಸ್ಥಾಪಿಸಲಾಗಿದೆ. ಇದರ ಮುಖ್ಯ ಕಛೇರಿ ಬೆಂಗಳೂರಿನಲ್ಲಿದ್ದು, ಇದರ ಕಾರ್ಯ ರಾಷ್ಟ್ರವ್ಯಾಪ್ತಿಯಾಗಿದೆ. ಇದರ ಮುಖ್ಯ ಕಾರ್ಯ ಉನ್ನತ ಶಿಕ್ಷಣದಲ್ಲಿ ಗುಣಮಟ್ಟವನ್ನು ವೃದ್ಧಿಸಲು ಅರಿವು ಮೂಡಿಸುವುದು, ನೀತಿ ನಿರೂಪಣೆ ಹಾಗೂ ಮಾರ್ಗೊಪಾಯಗಳ ಮೂಲಕ ಶಿಕ್ಷಣ ಸಂಸ್ಥೆಗಳನ್ನು ಮಾನ್ಯತೆಗೆ ಒಳಪಡಿಸುವುದಾಗಿರುತ್ತದೆ 
(
ಹೆಚ್ಚಿನ ಮಾಹಿತಿಗಾಗಿ).

2012ರಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಕಡ್ಡಾಯವಾಗಿ ಮಾನ್ಯತೆ ಮಾಡುವ ನಿಯಮವನ್ನು ಯುಜಿಸಿ ಜಾರಿಗೆ ತಂದಿದೆ. ಇದರನ್ವಯ ಐದು ವರ್ಷ ಪೂರ್ಣಗೊಳಿಸಿರುವ ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳು ಕಡ್ಡಾಯವಾಗಿ ಮಾನ್ಯತೆ ಒಳಪಡಬೇಕಾಗಿರುತ್ತದೆ. ಇದಲ್ಲದೇ, ಸ್ವಾಯತ್ತತೆ ಪಡೆಯುವುದು ಯು.ಜಿ.ಸಿ, ರೂಸ ಮುಂತಾದವುಗಳಿಂದ ಹಣಕಾಸು ನೆರವು ಪಡೆಯಲು ನ್ಯಾಕ್ ಮ್ಯಾನತೆ ಕಡ್ಡಾಯವಾಗಿದೆ.

ನ್ಯಾಕ್‍ನ ಕಾರ್ಯಸೂಚಿಯನ್ವಯ ಕರ್ನಾಟಕದಲ್ಲಿನ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಮಾನ್ಯತೆಗೆ ಅನುವು ಮಾಡಿಕೊಡಲು 2002ರಲ್ಲಿ ರಾಜ್ಯ ಗುಣಮಟ್ಟ ಭರವಸಾ ಕೋಶವನ್ನು ಸ್ಥಾಪಿಸಲಾಗಿದೆ. ಯುಜಿಸಿಯು ಕಡ್ಡಾಯ ಮಾನ್ಯತೆಯ ನಿಯಮವನ್ನು 2012ರಲ್ಲಿ ಜಾರಿಗೆ ತಂದರೂ ಕರ್ನಾಟಕವು 2002ನೇ ಇಸವಿಯಲ್ಲಿಯೇ ಮಾನ್ಯತೆಯನ್ನು ಕಡ್ಡಾಯ ಮಾಡಿದ ದೇಶದ ಮೊದಲ ರಾಜ್ಯವಾಗಿದೆ.

2013ರ ನಂತರ ಸರ್ಕಾರಿ ಕಾಲೇಜುಗಳನ್ನು ಮಾನ್ಯತೆಗೆ ಒಳಪಡಿಸಲು ಒತ್ತು ನೀಡಲಾಗಿದೆ. ತತ್ಪಲವಾಗಿ ಕರ್ನಾಟಕ  ಹೆಚ್ಚು ಉನ್ನತ ಶಿಕ್ಷಣ ಸಂಸ್ಥೆಗಳನ್ನು ಮಾನ್ಯತೆಗೆ ಒಳಪಡಿಸುವಲ್ಲಿ ಸಫಲವಾಗಿದ್ದು, ಇಡೀ ದೇಶದಲ್ಲಿಯೇ ಎರಡನೇ ಸ್ಥಾನವನ್ನು ಹಾಗೂ ದಕ್ಷಿಣ ಭಾರತದಲ್ಲಿ ಮೊದಲ ಸ್ಥಾನವನ್ನು ಹೊಂದಿದೆ.