ನೇಮಕಾತಿ ವಿಭಾಗ
ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸಹಾಯಕ ಪ್ರಾಧ್ಯಾಪಕರ ನೇಮಕಾತಿ, ಅನುಕಂಪದ ಆಧಾರದ ಮೇಲೆ ಬೋಧಕೇತರ ಹುದ್ದೆಗಳಿಗೆ ನೇಮಕಾತಿ, ಅತಿಥಿ ಉಪನ್ಯಾಸಕರ ಆಯ್ಕೆ ಹಾಗೂ ವೃಂದ & ನೇಮಕಾತಿ ನಿಯಮಗಳಿಗೆ ಸಂಬಂಧಿಸಿದ ಕಡತಗಳ ನಿರ್ವಹಣೆ ಮಾಡಲಾಗುವುದು ಹಾಗೂ ಹೈದ್ರಾಬಾದ್-ಕರ್ನಾಟಕ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಕಾಲೇಜುಗಳಲ್ಲಿ ಎಲ್ಲ ವೃಂದಗಳ ನೇಮಕಾತಿಯ ಬಗ್ಗೆ ಕ್ರಮಕೈಗೊಳ್ಳಲಾಗುವುದು.

ಖಾಸಗಿ ಅನುದಾನಿತ ಪ್ರಥಮ ದರ್ಜೆ ಕಾಲೇಜುಗಳಲ್ಲಿ, ಅನುದಾನಿತ ಬಿ.ಎಡ್. ಕಾಲೇಜುಗಳಲ್ಲಿ ಹಾಗೂ ಅನುದಾನಿತ ಕಾನೂನು ಕಾಲೇಜುಗಳಲ್ಲಿ ಖಾಲಿ ಇರುವ ಬೋಧಕರ ಹುದ್ದೆಗಳನ್ನು ಭರ್ತಿ ಮಾಡಲು ಹಾಗೂ ಬ್ಯಾಕ್‍ಲಾಗ್ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮಕೈಗೊಳ್ಳಲಾಗುವುದು. ಅಲ್ಲದೆ, ಎಸ್.ಸಿ/ಎಸ್.ಟಿ ಆಡಳಿತ ಮಂಡಳಿಗಳು ನಡೆಸುತ್ತಿರುವ 1987 ರಿಂದ 1995ರ ಒಳಗೆ ಪ್ರಾರಂಭಗೊಂಡಿರುವ ಪದವಿ ಕಾಲೇಜುಗಳನ್ನು ವೇತನಾನುದಾನಕ್ಕೆ ಒಳಪಡಿಸುವ ಬಗ್ಗೆ ಕ್ರಮಕೈಗೊಳ್ಳಲಾಗುವುದು ಹಾಗೂ ಬಿ.ಪಿ.ಎಡ್ ಕಾಲೇಜುಗಳನ್ನು ವೇತನಾನುದಾನಕ್ಕೆ ಒಳಪಡಿಸುವ ಬಗ್ಗೆ ಕ್ರಮಕೈಗೊಳ್ಳಲಾಗುವುದು, ಹೈದ್ರಾಬಾದ್-ಕರ್ನಾಟಕ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಖಾಸಗಿ ಅನುದಾನಿತ ಪ್ರಥಮ ದರ್ಜೆ ಕಾಲೇಜುಗಳಲ್ಲಿ 371(ಜೆ) ನಿಯಮಗಳನ್ವಯ ಅಗತ್ಯ ಕ್ರಮಕೈಗೊಳ್ಳಲಾಗುತ್ತಿದೆ.

ಸೇವಾ ವಿಭಾಗ
ಹಿಂದಿನ ಸೇವಾ ಅವಧಿ ಸಂರಕ್ಷಣೆ ವಿಷಯಗಳು, ಅರ್ಹತಾದಾಯಕ ಸೇವೆಗಳ ಪರಿಗಣನೆ.
ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಉಪನ್ಯಾಸಕರುಗಳಿಗೆ ಎಂ.ಫಿಲ್/ಪಿ.ಹೆಚ್.ಡಿ ಪದವಿ ಪ್ರಯುಕ್ತ, ಮುಂಗಡ ವೇತನ ಬಡ್ತಿಗಳ ಮಂಜೂರಾತಿ ಮತ್ತು ಖಾಸಗಿ ಅನುದಾನಿತ ಕಾಲೇಜುಗಳಿಗೆ ಸಂಬಂಧಿಸಿದಂತೆ ಎಂ.ಫಿಲ್/ಪಿ.ಹೆಚ್.ಡಿ ಮುಂಗಡ ಬಡ್ತಿಗಳ ಬಗ್ಗೆ ಪತ್ರ ವ್ಯವಹಾರ.
ಸೇವಾಪುಸ್ತಕ ಪುನರ್ ನಿರ್ಮಾಣ.
ಇಲಾಖೆಯ ಸಕಾಲದ ಕಾರ್ಯಕ್ರಮಗಳನ್ನು ನಿರ್ವಹಿಸುವುದು
ಸಣ್ಣ ಕುಟುಂಬ ಯೋಜನೆ ಪ್ರಯುಕ್ತ ವಿಶೇಷ ವೇತನ ಮಂಜೂರಾತಿ, ಅಂಗವಿಕಲ ಭತ್ಯೆ, ಸೈಕಲ್ ಆರ್ಡರ್ಲಿ ಭತ್ಯೆ, ವಿಶೇಷ ಭತ್ಯೆ, ಪ್ರಭಾರ ಭತ್ಯೆ, ಅಂಗವಿಕಲ ಮಕ್ಕಳ ಶಿಕ್ಷಣ ಭತ್ಯೆ, ಪೋಷಣಾ ಭತ್ಯೆ ಮತ್ತು ಇತರೆ ಭತ್ಯೆಗಳ ಮಂಜೂರಾತಿ.
ವರ್ಗಾವಣೆ ವಿಭಾಗ

ಕಾಲೇಜು ಶಿಕ್ಷಣ ಇಲಾಖೆಯ ಅಧೀನ ಕಛೇರಿ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರ ವರ್ಗಾವಣೆಗಳನ್ನು ಪ್ರಸ್ತುತ ಜಾರಿಯಲ್ಲಿರುವ ಕಾಲೇಜು ಶಿಕ್ಷಣ ಇಲಾಖೆಯ ವರ್ಗಾವಣೆ ಅಧಿನಿಯಮ-2012 ಹಾಗೂ ಅದರಡಿಯಲ್ಲಿ ರೂಪಿಸಲಾದ ನಿಯಮಗಳನ್ವಯ ಕೌನ್ಸಿಲಿಂಗ್ ಮುಖಾಂತರ ಕೈಗೊಳ್ಳುವುದು. ಆಡಳಿತಾತ್ಮಕ ಹಿತದೃಷ್ಟಿಯಿಂದ ಸರ್ಕಾರಿ ಹಾಗೂ ಖಾಸಗಿ ಅನುದಾನಿತ ಕಾಲೇಜುಗಳಲ್ಲಿನ ಕಾರ್ಯಭಾರವಿಲ್ಲದ ಭೋಧಕ/ಬೋಧಕೇತರ ಸಿಬ್ಬಂದಿ ವರ್ಗದವರನ್ನು ಅಗತ್ಯ ಕಾರ್ಯಭಾರವಿರುವ ಕಾಲೇಜು/ಕಛೇರಿಗಳಿಗೆ ನಿಯಮಾನುಸಾರ ನಿಯೋಜಿಸಲು ಕ್ರಮ ವಹಿಸುವುದು. ಮುಂದುವರೆದು, ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಖಾಲಿ ಹುದ್ದೆಗಳ ಮಾಹಿತಿ ನಿರ್ವಹಿಸುವುದು.

ಬಡ್ತಿ & ಸ್ಥಾನೀಕರಣ ವಿಭಾಗ

ಕೇಂದ್ರ ಕಛೇರಿ/ಪ್ರಾದೇಶಿಕ ಕಛೇರಿ/ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಬೋಧಕರು/ ಗ್ರಂಥಪಾಲಕರು/ದೈಹಿಕ ಶಿಕ್ಷಣ ಬೋಧಕರು/ಗ್ರೇಡ್-1/ಗ್ರೇಡ್-2 ಪ್ರಾಂಶುಪಾಲರು ಹಾಗೂ ಬೋಧಕೇತರ ನೌಕರರುಗಳ ಜ್ಯೇಷ್ಠತಾ ಪಟ್ಟಿ ಸಿದ್ಧಪಡಿಸುವುದು.
ಸರ್ಕಾರಿ ಹಾಗೂ ಖಾಸಗಿ ಅನುದಾನಿತ ಕಾಲೇಜುಗಳ ಉಪನ್ಯಾಸಕರಿಗೆ ಯು.ಜಿ.ಸಿ ವೇತನ ಶ್ರೇಣಿಯಲ್ಲಿ ವೃತ್ತಿ ಪದೋನ್ನತಿಯಡಿ ಉನ್ನತ ಎ.ಜಿ.ಪಿ ಮಂಜೂರು ಮಾಡುವುದು.
ಗ್ರೇಡ್-1, ಗ್ರೇಡ್-2 ಪ್ರಾಂಶುಪಾಲರ ಹುದ್ದೆಗೆ ಬಡ್ತಿ ಹಾಗೂ ಬೋಧಕೇತರ ಎಲ್ಲ ವೃಂದದ ಸರ್ಕಾರಿ ಹಾಗೂ ಖಾಸಗಿ ಅನುದಾನಿತ ಕಾಲೇಜುಗಳ ನೌಕರರಿಗೆ ಬಡ್ತಿ ನೀಡುವುದು.
ಹೈದ್ರಾಬಾದ್-ಕರ್ನಾಟಕ ಸ್ಥಳೀಯ ವೃಂದದ ಜ್ಯೇಷ್ಠತಾ ಪಟ್ಟಿಗಳನ್ನು ಸಿದ್ಧಪಡಿಸುವುದು ಮತ್ತು ಸದರಿ ನೌಕರರಿಗೆ ಬಡ್ತಿ ನೀಡುವುದು.
ಮೇಲ್ಕಂಡ ಪ್ರಕರಣಗಳಿಗೆ ಸಂಬಂಧಿಸಿದಂತೆ ಆಯೋಗ/ನ್ಯಾಯಾಲಯಕ್ಕೆ ಸಂಬಂಧಿಸಿದ ತೀರ್ಪಿನ ಅನುಷ್ಠಾನಕ್ಕೆ ಸಂಬಂಧಿಸಿದ ಕಾರ್ಯ.


ತನಿಖಾ ವಿಭಾಗ
ತನಿಖಾ ವಿಭಾಗದಲ್ಲಿ ಸರ್ಕಾರಿ ಹಾಗೂ ಖಾಸಗಿ ಅನುದಾನಿತ ಕಾಲೇಜುಗಳಿಗೆ ಸಂಬಂಧಿಸಿದ ದೂರುಗಳು, ಇಲಾಖಾ ವಿಚಾರಣೆ, ಶಿಸ್ತುಕ್ರಮಗಳು, ವಿಚಾರಣೆ, ಆಯೋಗದಲ್ಲಿನ ದೂರುಗಳಿಗೆ ವರದಿ ನೀಡುವುದು, ಸರ್ಕಾರಿ ಕಾಲೇಜುಗಳ ಆಡಳಿತಾತ್ಮಕ ತಪಾಸಣೆ, ಲೋಕಾಯುಕ್ತ ಹಾಗೂ ಭ್ರಷ್ಟಾಚಾರ ನಿಗ್ರಹ ದಳದ ದೂರುಗಳ ಬಗ್ಗೆ ಪರಿಶೀಲಿಸಿ, ಸಂಬಂಧಪಟ್ಟವರಿಗೆ ವರದಿ ಸಲ್ಲಿಸುವುದು ಮತ್ತು ಮಾಹಿತಿ ಹಕ್ಕು ಅಧಿನಿಯಮದ ವರದಿಯನ್ನು ಕ್ರೋಢೀಕರಿಸಿ ಸರ್ಕಾರಕ್ಕೆ ಸಲ್ಲಿಸುವುದು, ಮಾಹಿತಿ ಹಕ್ಕು ಮೇಲ್ಮನವಿ ಹಾಗೂ ದೂರುಗಳಿಗೆ ಸಂಬಂಧಿಸಿದಂತೆ ಕಾರ್ಯನಿರ್ವಹಿಸುವುದು ಹಾಗೂ ಇತರೆ ದೂರು/ಲೋಪಗಳ ಬಗ್ಗೆ ತನಿಖಾ ತಂಡ ರಚಿಸಿ ತನಿಖೆ / ವಿಚಾರಣೆ ನಡೆಸಿ ವರದಿ ಸಲ್ಲಿಸುವುದು.

ಕಾನೂನು ಕೋಶ
ರಾಜ್ಯ ಉಚ್ಛ ನ್ಯಾಯಾಲಯ ಬೆಂಗಳೂರು, ದಾರವಾಡ, ಕಲಬುರ್ಗಿ ಮತ್ತು ಸರ್ವೋಚ್ಛ ನ್ಯಾಯಾಲಯ ಹಾಗೂ ಇತರೇ ನ್ಯಾಯಾಲಯಗಳಲ್ಲಿ ಸರ್ಕಾರ/ಇಲಾಖೆ ವಿರುದ್ಧ ದಾಖಲಾಗುವ ರಿಟ್ ಅರ್ಜಿ, ರಿಟ್ ಅಪೀಲು ಹಾಗೂ ನಿಂದನಾ ಅರ್ಜಿಗಳ ಮೇಲ್ವಿಚಾರಣೆ, ಮಾನ್ಯ ಪ್ರಧಾನ ಕಾರ್ಯದರ್ಶಿ/ ಆಯುಕ್ತರುಗಳ ಸಮಕ್ಷಮದಲ್ಲಿ ಕರ್ನಾಟಕ ಶಿಕ್ಷಣ ಕಾಯ್ದೆಯಡಿಯಲ್ಲಿ ದಾಖಲಾಗುವ ಅಪೀಲುಗಳ ಮೇಲುಸ್ತುವಾರಿ, ಕಂಡಿಕೆವಾರು ಷರಾವನ್ನು ಆಡಳಿತ ವಿಭಾಗಗಳಿಂದ ಪಡೆದು ಸರ್ಕಾರಿ ವಕೀಲರಿಗೆ ರವಾನಿಸುವುದು.  ನ್ಯಾಯಾಲಯದ ತೀರ್ಪಿನ ನಂತರ ಅದನ್ನು ಅನುಷ್ಠಾನಗೊಳಿಸುವ ಬಗ್ಗೆ ಕ್ರಮ ಜರುಗಿಸುವಂತೆ ಸಂಬಂಧಪಟ್ಟ ಆಡಳಿತ ವಿಭಾಗಗಳಿಗೆ ತಿಳಿಸುವುದು. ಮುಂದುವರೆದು, ನ್ಯಾಯಾಲಯದ ಪ್ರಕರಣಗಳ ಕುರಿತಂತೆ ಹೆಚ್ಚುವರಿ ಮಾಹಿತಿ/ದಾಖಲಾತಿಗಳನ್ನು ಸರ್ಕಾರಿ ವಕೀಲರಿಗೆ ಒದಗಿಸುವುದು ಹಾಗೂ ಮೇಲಾಧಿಕಾರಿಗಳು ತಿಳಿಸಿದ ನ್ಯಾಯಾಲಯಕ್ಕೆ ಸಂಬಂಧಪಟ್ಟ ಇತರೆ ಕೆಲಸವನ್ನು ಮಾಡುವುದು.

ಶೈಕ್ಷಣಿಕ ವಿಭಾಗ
ಹೊಸ ಕೋರ್ಸ್/ಕಾಂಬಿನೇಷನ್: 2017-18ನೇ ಸಾಲಿನಲ್ಲಿ 61 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಹೊಸದಾಗಿ ಬಿ.ಎ, ಬಿ.ಎಸ್ಸಿ., ಬಿ.ಕಾಂ. ಬಿ.ಸಿ.ಎ, ಬಿ.ಬಿಎಂ. ಬಿಎಸ್.ಡಬ್ಲ್ಯೂ, ಬಿ.ವೋಕ್ ಪದವಿ ಕೋರ್ಸ್ / ಕಾಂಬಿನೇಷನ್‍ಗಳನ್ನು ಹಾಗೂ 31 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಹೊಸದಾಗಿ ಎಂ.ಎ. ಎಂ.ಎಸ್ಸಿ, ಎಂ.ಕಾಂ., ಎಂ.ಎಸ್.ಡಬ್ಲ್ಯೂ, ಎಂ.ಬಿ.ಎ., ಎಂ.ಲಿಬ್ ಸೈನ್ಸ್, ಸ್ನಾತಕೋತ್ತರ ಕೋರ್ಸ್‍ಗಳನ್ನು ಪ್ರಾರಂಭಿಸಲು ಅನುಮತಿ ನೀಡಲಾಗುವುದು.

ವಿಜ್ಞಾನ ಕೋರ್ಸ್‍ಗಳ ಅಭಿವೃದ್ಧಿ:  ವಿಜ್ಞಾನ ಕೋರ್ಸ್‍ಗಳನ್ನು ಅಭಿವೃದ್ಧಿಪಡಿಸುವ ಸಂಬಂಧ, ವಿಜ್ಞಾನ ವಿಷಯ ಬೋಧಿಸುವ 173 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ಹಾಗೂ ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಷಯಗಳಲ್ಲಿ ಸ್ನಾತಕೋತ್ತರ ಕೋರ್ಸ್‍ಗಳನ್ನು ಹೊಂದಿರುವ 23 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ಅವಶ್ಯವಿರುವ ಪ್ರಯೋಗಾಲಯ ಉಪಕರಣಗಳು, ರಾಸಾಯನಿಕಗಳು / ಕನ್ಸುಮಬಲ್ಸ್, ಪಠ್ಯ/ಪರಾಮರ್ಶನ ಪುಸ್ತಕಗಳು ಹಾಗೂ ಪೀಠೋಪಕರಣ ಮತ್ತಿತರ ಸೌಲಭ್ಯಗಳಿಗಾಗಿ ಪ್ರತಿ ಶೈಕ್ಷಣಿಕ ವರ್ಷದಲ್ಲಿ ಅನುದಾನವನ್ನು ಬಿಡುಗಡೆ ಮಾಡಲಾಗುವುದು.

ಮಾಹಿತಿ ತಂತ್ರಜ್ಞಾನ ವಿಭಾಗ
ಇಲಾಖೆಯಲ್ಲಿ -ಆಡಳಿತ ಕ್ರಿಯಾ ಯೋಜನೆಯನ್ನು ಅನುಷ್ಟಾನಗೊಳಿಸುವುದು.
ವಾರ್ಷಿಕ -ಆಡಳಿತ ಕ್ರಿಯಾ ಯೋಜನೆ ತಯಾರಿಸಿ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸುವುದು ಮತ್ತು -ಆಡಳಿತ ಇಲಾಖೆಯಿಂದ ವಾರ್ಷಿಕ ಕ್ರಿಯಾ ಯೋಜನೆಯ ಅನುಮೋದನೆ ಪಡೆಯುವುದು.
ಇಲಾಖೆಯ ಎಲ್ಲ ವಿಭಾಗಗಳಿಗೆ ಸಂಬಂಧಿಸಿದ -ಪ್ರಕ್ರ್ಯೂಟ್ಮೆಂಟ್ ನಿರ್ವಹಣೆ.
-ಪ್ರಕ್ರ್ಯೂಟ್ಮೆಂಟ್ಗೆ ಸಂಬಂಧಿಸಿದ Tender Document ತಯಾರಿಸುವುದು prebid meeting ನಡೆಸುವುದು ಹಾಗೂ ಟೆಂಡರ್ ಮೌಲ್ಯ ನಿರ್ಣಯ (evaluation) ಮಾಡುವುದು.
ವೆಬ್ಸೈಟ್ ಪೋರ್ಟಲ್ ತಂತ್ರಾಂಶದ ಬಗ್ಗೆ ಎಲ್ಲ ಕಾಲೇಜುಗಳ ಕೋ-ಅರ್ಡಿನೇಟರ್ಗಳೊಂದಿಗೆ ತಾಂತ್ರಿಕವಾಗಿ ಮಾರ್ಗದರ್ಶನ ಹಾಗೂ ಕಾರ್ಯವೈಖರಿಯ ಬಗ್ಗೆ ಸತತವಾಗಿ ನಿಯಂತ್ರಿಸುವುದು
ಇಲಾಖೆಯಲ್ಲಿ ಹಾಗೂ ಸರ್ಕಾರಿ ಕಾಲೇಜುಗಳಲ್ಲಿ ಮಾಹಿತಿ ತಂತ್ರಜ್ಞಾನ / .ಸಿ.ಟಿ ಉಪಯೋಗದ ವಿಸ್ತರಣೆ ಬಗ್ಗೆ ಅಗತ್ಯ ಕಾರ್ಯಯೋಜನೆ ರೂಪಿಸಿ ಇಲಾಖಾ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಅನುಷ್ಠಾನಗೊಳಿಸುವ ಬಗ್ಗೆ ಕಾರ್ಯ ನಿರ್ವಹಿಸುವುದು.
ಹೆಚ್.ಆರ್.ಎಮ್.ಎಸ್ ಬಳಕೆಯ ಬಗ್ಗೆ ತರಬೇತಿ ನೀಡಿ ತಂತ್ರಾಶದ ಬಗ್ಗೆ ಬಳಕೆದಾರರ ಸಾಮರ್ಥ್ಯ ಹೆಚ್ಚಿಸುವುದು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿರುವ ಗ್ರಂಥಾಲಯಗಳನ್ನು ಕಂಪ್ಯೂಟರೀಕರಣಗೊಳಿಸಿ ಗ್ರಂಥಾಲಯ ನಿರ್ವಹಣೆಯನ್ನು ಯಾಂತ್ರೀಕರಣಗೊಳಿಸಲು ಕ್ರಮ ಕೈಗೊಳ್ಳುವುದು.
ಎಜುಸ್ಯಾಟ್/ಟೆಲಿ-ಶಿಕ್ಷಣ/ಬಯೋಮೆಟ್ರಿಕ್ ಕಾರ್ಯಕ್ರಮಗಳನ್ನು ಅಧಿಕಾರಿಗಳಿಗೆ ಅಗತ್ಯ ತಾಂತ್ರಿಕ ಮಾರ್ಗದರ್ಶನ ನೀಡಿ, ಪೂರ್ಣ ಪ್ರಮಾಣದಲ್ಲಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಬಗ್ಗೆ ಕ್ರಮ ಕೈಗೊಳ್ಳುವುದು.
ರಾಜ್ಯದ ಎಲ್ಲ ಸರ್ಕಾರಿ ಹಾಗೂ ಅನುದಾನಿತ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ, ಬೋಧಕ ಬೋಧಕೇತರ ಸಿಬ್ಬಂದಿಗಳ ಮಾಹಿತಿ ಸಂಗ್ರಹಿಸಲು ಇಎಮ್ಐಎಸ್ (Educational Management Information System - EMIS) ತಂತ್ರಾಂಶವನ್ನು ರೂಪಿಸಿ ನಿರ್ವಹಣೆ ಮಾಡಲಾಗುತ್ತಿದೆ.

ಯೋಜನೆ ವಿಭಾಗ
ಇಲಾಖೆಗೆ ಸಂಬಂಧಿಸಿದ ಹೊಸ ಕಾರ್ಯಕ್ರಮಗಳ ಬಗ್ಗೆ ಅನುಷ್ಠಾನ ಕುರಿತು ಪ್ರಸ್ತಾವನೆಯನ್ನು ಸಿದ್ಧಪಡಿಸುವುದು. ವಾರ್ಷಿಕ ಆಯವ್ಯಯ ಅಂದಾಜನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸುವುದು. ಸರ್ಕಾರದಿಂದ ಬಿಡುಗಡೆಯಾದ ಅನುದಾನದ ವೆಚ್ಚದ ಮಾಹಿತಿಯನ್ನು DSS ಮುಖಾಂತರ ಆನ್‍ಲೈನ್ ಮೂಲಕ ಸಲ್ಲಿಸುವುದು. ನಿರ್ವಹಣಾ ಮುಂಗಡ ಪತ್ರ, ಮಹಿಳಾ ಉದ್ದೇಶಿತ ಆಯವ್ಯಯ ಮತ್ತು ಆರ್ಥಿಕ ಸಮೀಕ್ಷೆಗೆ ಸಂಬಂಧಿಸಿದ ಮಾಹಿತಿಗಳನ್ನು ಸಿದ್ಧಪಡಿಸುವುದು. ಹೊಸ ವಿವಿಧ ಯೋಜನೆಗಳ ಬಗ್ಗೆ ಕೋರಿ ಸ್ವೀಕೃತವಾಗುವ ಮನವಿಗಳನ್ನು ಪರಿಶೀಲಿಸಿ ಪ್ರಾದೇಶಿಕ ಜಂಟಿ ನಿರ್ದೇಶಕರಿಂದ ಸ್ಥಳ ಪರಿಶೀಲನಾ ವರದಿ ಪಡೆದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದು. ಇಲಾಖೆಯ ವಿವಿಧ ಕಟ್ಟಡ ನಿರ್ಮಾಣಕ್ಕಾಗಿ ನಿವೇಶನವನ್ನು ದಾನವಾಗಿ ನೀಡುವ ದಾನಿಗಳು ಇಚ್ಛಿಸಿದವರ ಹೆಸರನ್ನು ನಾಮಕರಣ ಮಾಡುವುದು. ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಕಛೇರಿ ಮತ್ತಿತರೆ ವೆಚ್ಚಗಳಿಗೆ ಅನುದಾನವನ್ನು ಬಿಡುಗಡೆ ಮಾಡುವುದು. ಆಯವ್ಯಯದಲ್ಲಿ ಒದಗಿಸಿದ ಅನುದಾನದಲ್ಲಿ ವೆಚ್ಚವಾಗಿ ಉಳಿಕೆಯಾದ ಅನುದಾನವನ್ನು ಸರ್ಕಾರಕ್ಕೆ ಮರು ಒಪ್ಪಿಸುವುದು. ಕೆ.ಡಿ.ಪಿ ಸಭೆಗೆ ಮತ್ತು ಸಿ.ಎಂ ಡ್ಯಾಷ್ ಬೋರ್ಡ್‍ಗೆ ಮಾಹಿತಿಯನ್ನು ಸಲ್ಲಿಸುವುದು. ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಹೆಸರು ಬದಲಾವಣೆಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದು.

ಆಯವ್ಯಯ ವಿಭಾಗ

ಖಾಸಗಿ ಅನುದಾನಿತ ಪದವಿ, ಬಿ.ಎಡ್ ಮತ್ತು ಕಾನೂನು ಕಾಲೇಜುಗಳ ಸಿಬ್ಬಂದಿಗಳ ವೇತನ ಮತ್ತು ಇತರೆ ಬಾಕಿಗಳಿಗಾಗಿ ವೇತನಾನುದಾನ ಬಿಡುಗಡೆ ಮಾಡುವುದು. ಸರ್ಕಾರದಿಂದ ಬಿಡುಗಡೆಯಾದ ಅನುದಾನದ ವೆಚ್ಚದ ಮಾಹಿತಿಯನ್ನು DSS ಮುಖಾಂತರ ಆನ್‍ಲೈನ್ ಮೂಲಕ ಸಲ್ಲಿಸುವುದು. ಅತಿಥಿ ಉಪನ್ಯಾಸಕರುಗಳಿಗೆ ಸಂಭಾವನೆ ಪಾವತಿಸುವುದು. ಕೇಂದ್ರ ಕಛೇರಿ ಮತ್ತು 06 ಪ್ರಾದೇಶಿಕ ಕಛೇರಿಗಳಿಗೆ ಕಛೇರಿ ಮತ್ತಿತರೆ ವೆಚ್ಚಗಳಿಗೆ ಅನುದಾನವನ್ನು ಬಿಡುಗಡೆ ಮಾಡುವುದು. ಅನುದಾನದ ಪುನರ್ ವಿನಿಯೋಗಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದು. ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಖಾಸಗಿ ಅನುದಾನಿತ ಪದವಿ, ಬಿ.ಎಡ್ ಮತ್ತು ಕಾನೂನು ಕಾಲೇಜುಗಳ ಸಿಬ್ಬಂದಿಗಳ ವೇತನಕ್ಕಾಗಿ ಒದಗಿಸಿರುವ ಅನುದಾನದಲ್ಲಿ ಕೊರತೆ ಉಂಟಾದಲ್ಲಿ ಹೆಚ್ಚುವರಿ ಅನುದಾನ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದು.

ಆಯುಕ್ತಾಲಯದ ಮುಖ್ಯ ವಿಭಾಗಗಳು
 
ಎನ್.ಐ.ಸಿ. ಸರ್ವರ್ ಕರ್ನಾಟಕದಲ್ಲಿ ಪ್ರಕಟಿಸಲಾಗಿದೆ
ಬೆಂಗಳೂರು
ರಚನೆ, ವಿನ್ಯಾಸ ಮತ್ತು ನಿರ್ವಹಣೆ
ಮಾಹಿತಿ ತಂತ್ರಜ್ಞಾನ ವಿಭಾಗ, ಆಯುಕ್ತರ ಕಛೇರಿ,
ಕಾಲೇಜು ಶಿಕ್ಷಣ ಇಲಾಖೆ, ಬೆಂಗಳೂರು
ರಚನೆ, ವಿನ್ಯಾಸ ಮತ್ತು ನಿರ್ವಹಣೆ
ಮಾಹಿತಿ ತಂತ್ರಜ್ಞಾನ ವಿಭಾಗ, ಆಯುಕ್ತರ ಕಛೇರಿ,
ಕಾಲೇಜು ಶಿಕ್ಷಣ ಇಲಾಖೆ, ಬೆಂಗಳೂರು
© ಕಾಲೇಜು ಶಿಕ್ಷಣ ಇಲಾಖೆ, ಬೆಂಗಳೂರು - 560 001, ಕರ್ನಾಟಕ ಸರ್ಕಾರ, ಭಾರತ.