ಸರ್ಕಾರ ತನ್ನ ಸುತ್ತೋಲೆ ಸಿಆಸುಇ 23 ತಎಇ 2012 ರಲ್ಲಿ ಬಯೋಮೆಟ್ರಿಕ್ ಸಮಯ ಹಾಜರಾತಿ ಮೇಲ್ವಿಚಾರಣಾ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಲು ಮಾರ್ಗಸೂಚಿಗಳನ್ನು ನೀಡಿದ್ದು, 1ನೇ ನವೆಂಬರ 2013ರೊಳಗೆ ಇದನ್ನು ಜಾರಿಗೊಳಿಸುವಂತೆ ಎಲ್ಲ ಇಲಾಖೆಗಳ ಮುಖ್ಯಸ್ಥರಿಗೆ ಆದೇಶಿಸಿರುತ್ತದೆ. ಮಾನ್ಯ ಲೋಕಾಯುಕ್ತರು ಕೋಲಾರದ ಸರ್ಕಾರಿ ಬಾಲಕರ ಕಾಲೇಜಿಗೆ ಭೇಟಿ ನೀಡಿದ ನಂತರ ಎಲ್ಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಬಯೋಮೆಟ್ರಿಕ್ ಸಮಯ ಹಾಜರಾತಿ ಮೇಲ್ವಿಚಾರಣಾ ವ್ಯವಸ್ಥೆಯನ್ನು ಅನುಷ್ಠಾನಗೊಳಿಸುವಂತೆ ಆದೇಶಿಸಿರುತ್ತಾರೆ. ಆದ್ದರಿಂದ ಬಯೋಮೆಟ್ರಿಕ್ ಸಮಯ ಹಾಜರಾತಿ ಮೇಲ್ವಿಚಾರಣಾ ವ್ಯವಸ್ಥೆಯನ್ನು ಎಲ್ಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಮತ್ತು ಪ್ರಾದೇಶಿಕ ಕಛೇರಿಗಳಲ್ಲಿ ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದೆ.

331 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ, ಪ್ರಾದೇಶಿಕ ಕಛೇರಿಗಳಿಗೆ ಮತ್ತು ಕೇಂದ್ರ ಕಛೇರಿಗೆ ಸರಬರಾಜು ಮಾಡಲಗಿರುವ 
VgÀĪÀ eSSL - iFACE 302 ಉಪಕರಣಗಳು, ಆನ್ಬೋರ್ಡ್ ಜಿಎಸ್ಎಂ ಕಾರ್ಡ್ ಉಳ್ಳ ಬಹು ಬಯೋಮೆಟ್ರಿಕ್ ಮುಖ ಮತ್ತು ಬೆರಳಚ್ಚು ಗುರುತಿಸುವ ಸಮಯ ಹಾಜರಾತಿ ಮೇಲ್ವಿಚಾರಣಾ ವ್ಯವಸ್ಥೆಯಾಗಿದ್ದು, ಜಿಎಸ್ಎಂ ಆಧಾರಿತ ಪುಶ್ ತಂತ್ರಜ್ಞಾನವನ್ನು ಬಳಸಿ ಸಮಯ-ಹಾಜರಾತಿಯನ್ನು ದೂರದಿಂದ ಸಂಗ್ರಹಿಸುವಂತೆ ರಚಿಸಲ್ಪಟ್ಟಿವೆ.
ಈ ಉಪಕರಣಗಳು ಸಮಗ್ರ 5 ವರ್ಷಗಳ ಆನ್ಸೈಟ್ ಖಾತ್ರಿಯೊಂದಿಗೆ ಸರಬರಾಜು ಮಾಡಲ್ಪಟ್ಟಿವೆ.
ಈ ಉಪಕರಣಗಳು ಬಹು ಬಯೋಮೆಟ್ರಿಕ್ ಸಾಮಥ್ರ್ಯವನ್ನು ಹೊಂದಿದ್ದು, ಸಿಬ್ಬಂದಿಯನ್ನು ಗುರುತಿಸಲು ಮುಖ ಮತ್ತು ಬೆರಳಚ್ಚನ್ನು ನಮೂದಿಸಿಕೊಳ್ಳುತ್ತದೆ.
ಸಿಬ್ಬಂದಿಯ ಮುಖ ಮತ್ತು ಬೆರಳಚ್ಚುಗಳೆರಡನ್ನೂ ನಮೂದಿಸಿಕೊಳ್ಳಲಾಗುತ್ತದೆ.
ಹಾಜರಾತಿಯನ್ನು ಪಂಚ್ ಮಾಡಲು ಮುಖದ ಗುರುತನ್ನಾಗಲೀ, ಬೆರಳಚ್ಚಿನ ಗುರುತನ್ನಾಗಲೀ ಉಪಯೋಗಿಸಬಹುದಾಗಿರುತ್ತದೆ.
ಪ್ರವೇಶಕ್ಕೆ ಅನ್ವಯಿಸುವಂತೆ ಒಮ್ಮೆ ಮತ್ತು ನಿರ್ಗಮನಕ್ಕೆ ಅನ್ವಯಿಸುವಂತೆ ಒಮ್ಮೆ, ದಿನಕ್ಕೆ ಎರಡು ಬಾರಿ ಹಾಜರಾತಿಯನ್ನು ಪಂಚ್ ಮಾಡುವುದು ಕಡ್ಡಾಯವಾಗಿರುತ್ತದೆ.
ಪಂಚ್ ಮಾಡುವ ಎಲ್ಲ ಪ್ರಯತ್ನಗಳನ್ನೂ ಉಪಕರಣ ಸಂಗ್ರಹಿಸುತ್ತದೆ ಮತ್ತು ಕೇಂದ್ರೀಯ ಸರ್ವರ್ನಲ್ಲಿ ದಾಖಲಿಸುತ್ತದೆ. ಆದರೆ ದಿನದ ಮೊದಲ ಮತ್ತು ಕೊನೆಯ ಪಂಚ್ಗಳನ್ನು ಪ್ರವೇಶ ಹಾಗೂ ನಿರ್ಗಮನ ಎಂದು ಪರಿಗಣಿಸಲಾಗುತ್ತದೆ
ಸಿಬ್ಬಂದಿ ಹಾಜರಾತಿಯನ್ನು ಪಂಚ್ ಮಾಡಿದ ಕೂಡಲೇ ಜಿಎಸ್ಎಂ ಮೊಬೈಲ್ ಸಿಗ್ನಲ್ ಮೂಲಕ ಹಾಜರಾತಿ ಮಾಹಿತಿ ಕಾಲೇಜು ಶಿಕ್ಷಣ ಇಲಾಖೆಯ ಕೇಂದ್ರ ಕಛೇರಿಯಲ್ಲಿರುವ ಸರ್ವರ್ನಲ್ಲಿ ದಾಖಲಾಗುತ್ತದೆ. 
ಕಾಲೇಜು ಕಾರ್ಯ ನಿರ್ವಹಿಸುವ ಎಲ್ಲ ದಿನಗಳಂದು ಈ ಉಪಕರಣವನ್ನು ಚಾರ್ಜ್ ಮಾಡತಕ್ಕದ್ದು.
ಈ ಉಪಕರಣವನ್ನು ಕಾಲೇಜುಗಳಿಗೆ ಒದಗಿಸಿರುವ ಲೋಹದ ಪೆಟ್ಟಿಗೆಯೊಳಗೆ ಇಟ್ಟು  ಬೀಗ ಹಾಕತಕ್ಕದ್ದು.
ಬಯೋಮೆಟ್ರಿಕ್ ಉಪಕರಣ ಸುಸ್ಥಿತಿಯಲ್ಲಿದ್ದು ಹಾಜರಾತಿಯನ್ನು ಸಂಗ್ರಹಿಸಲು ಲಭ್ಯವಿರುವಂತೆ ಪ್ರಾಂಶುಪಾಲರು ಸೂಕ್ತ ಕ್ರಮ ಕೈಗೊಳ್ಳತಕ್ಕದ್ದು.

ಪ್ರಾಂಶುಪಾಲರಿಗೆ ಪ್ರಮುಖ ಟಿಪ್ಪಣಿ:
ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆಯಲ್ಲಿ ಅತಿಥಿ ಉಪನ್ಯಾಸಕರು ನೋಂದಣಿ ಮತ್ತು ಬಯೋಮೆಟ್ರಿಕ್ ಉಪಕರಣದ ಮೂಲಕ ಹಾಜರಾತಿಯನ್ನು ಪಂಚ್ ಮಾಡುವುದು ಕಡ್ಡಾಯವಾಗಿರುತ್ತದೆ.
ಅತಿಥಿ ಉಪನ್ಯಾಸಕರು ತಮಗೆ ವೇಳಾಪಟ್ಟಿಯಲ್ಲಿ ತರಗತಿಗಳನ್ನು ನಿಗದಿಪಡಿಸಿರುವ ದಿನಗಳಂದು ಮೊದಲ ತರಗತಿಗೆ ಸ್ವಲ್ಪ ಪೂರ್ವದಲ್ಲಿ ಮತ್ತು ಕೊನೆಯ ತರಗತಿಯ ನಂತರದಲ್ಲಿ ಹಾಜರಾತಿಯನ್ನು ಪಂಚ್ ಮಾಡತಕ್ಕದ್ದು.
ಅತಿಥಿ ಉಪನ್ಯಾಸಕರಿಗೆ ನೀಡಿರುವ ತರಗತಿಗಳಿಗೆ ವಾರದಲ್ಲಿ ಮೂರು ನಾಲ್ಕು ದಿನಗಳಲ್ಲಿ ಅವಕಾಶ ಕಲ್ಪಿಸುವಂತೆ ಪ್ರಾಂಶುಪಾಲರು ಕ್ರಮ ವಹಿಸುವುದು.
ಕಾಲೇಜಿನ ಕ್ರಮಸಂಖ್ಯೆಯ ನಂತರ ಅರ್ಜಿಯ ಕೊನೆಯ ಐದು ಅಂಕಿಗಳನ್ನು ಬಯೋಮೆಟ್ರಿಕ್ ಉಪಕರಣದಲ್ಲಿ ಜಿಎಫ್ ಮೂಲಕ ನೋಂದಣಿ ಮಾಡಿಕೊಳ್ಳಲು
USER ID ಎಂದು ಉಪಯೋಗಿಸಲಾಗುತ್ತದೆ.
ಉದಾಹರಣೆಗೆ, ಕಾಲೇಜಿನ ಕ್ರಮಸಂಖ್ಯೆ 124 ಮತ್ತು ಅತಿಥಿ ಉಪನ್ಯಾಸಕರ ಅರ್ಜಿ ಸಂಖ್ಯೆ N473004723 ಆಗಿದ್ದಲ್ಲಿ 12404723 ಆಗಿರುತ್ತದೆ.
ಬಯೋಮೆಟ್ರಿಕ್ ಅಟೆಂಡೆನ್ಸ್ ಸಿಸ್ಟಮ್ ಆರ್ಕಿಟೆಕ್ಚರ್:
 
 
8th Aug.
 
ಎನ್.ಐ.ಸಿ. ಸರ್ವರ್ ಕರ್ನಾಟಕದಲ್ಲಿ ಪ್ರಕಟಿಸಲಾಗಿದೆ
ಬೆಂಗಳೂರು
ರಚನೆ, ವಿನ್ಯಾಸ ಮತ್ತು ನಿರ್ವಹಣೆ
ಮಾಹಿತಿ ತಂತ್ರಜ್ಞಾನ ವಿಭಾಗ, ಆಯುಕ್ತರ ಕಛೇರಿ,
ಕಾಲೇಜು ಶಿಕ್ಷಣ ಇಲಾಖೆ, ಬೆಂಗಳೂರು
ರಚನೆ, ವಿನ್ಯಾಸ ಮತ್ತು ನಿರ್ವಹಣೆ
ಮಾಹಿತಿ ತಂತ್ರಜ್ಞಾನ ವಿಭಾಗ, ಆಯುಕ್ತರ ಕಛೇರಿ,
ಕಾಲೇಜು ಶಿಕ್ಷಣ ಇಲಾಖೆ, ಬೆಂಗಳೂರು
© ಕಾಲೇಜು ಶಿಕ್ಷಣ ಇಲಾಖೆ, ಬೆಂಗಳೂರು - 560 001, ಕರ್ನಾಟಕ ಸರ್ಕಾರ, ಭಾರತ.