ಶಿಕ್ಷಣ ನಿರ್ವಹಣಾ ಮಾಹಿತಿ ವ್ಯವಸ್ಥೆ
ಉನ್ನತ ಮಟ್ಟದ ನೋಟ
ಸಮರ್ಪಕವಾದ ಶೈಕ್ಷಣಿಕ ಯೋಜನೆಗಳನ್ನು ರೂಪಿಸಲು ಗುಣಾಧಾರಿತ ಮತ್ತು ಸಂಖ್ಯಾಧಾರಿತ ಮಾಹಿತಿ ಅತ್ಯಗತ್ಯವಾಗಿರುತ್ತದೆ. ಆದ್ದರಿಂದ ಕಾಲೇಜುಗಳಿಂದ ಮಾಹಿತಿಯನ್ನು ಸಮರ್ಪಕವಾಗಿ ಸಂಗ್ರಹಿಸಲು ಬಳಕೆದಾರ-ಸ್ನೇಹಿಯಾದ ಮಾಹಿತಿ ವ್ಯವಸ್ಥೆ ಅಗತ್ಯವಾಗುತ್ತದೆ. ಶಿಕ್ಷಣ ನಿರ್ವಹಣಾ ಮಾಹಿತಿ ವ್ಯವಸ್ಥೆ (EMIS) ಎಲ್ಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಂದ ನಿಖರ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಸಂಗ್ರಹಿಸಿ, ಕ್ರೋಢೀಕರಿಸಿ ವಿತರಿಸುವ ಮೂಲಕ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು, ಮೇಲ್ವಿಚಾರಣೆ ಹಾಗೂ ನಿರ್ವಹಣೆಯನ್ನು ಸಮರ್ಪಕವಾಗಿ ತೀರ್ಮಾನಿಸಲು ರೂಪಿಸಲ್ಪಟ್ಟಿರುವ ಜಾಲತಾಣಧಾರಿತ ಆನ್‍ಲೈನ್ ವ್ಯವಸ್ಥೆಯಾಗಿರುತ್ತದೆ. ಈ ವ್ಯವಸ್ಥೆಯನ್ನು National Informatics Centre (NIC), Bangalore ನ ಸಹಾಯದೊಂದಿಗೆ ರೂಪಿಸಲಾಗಿದೆ. ಸರ್ವರ್ ವ್ಯವಸ್ಥೆಯನ್ನೂ NIC ಒದಗಿಸಿರುತ್ತದೆ.

EMIS ಈ ಕೆಳಕಂಡ ಕೋಶಗಳನ್ನು ಒಳಗೊಂಡಿದೆ:

ವಿದ್ಯಾರ್ಥಿಗಳ ಪ್ರವೇಶಾತಿ ವಿವರಗಳು - ವರ್ಗ/ಜಾತಿಗೆ ಅನುಗುಣವಾಗಿ, ಕೋರ್ಸ್/ವಿಷಯ ಸಂಯೋಜನೆಗೆ ಅನುಗುಣವಾಗಿ, ಪ್ರತಿ ಕಾಲೇಜಿನಲ್ಲಿ ಅಧ್ಯಯನ ವಿಷಯಕ್ಕೆ ಅನುಗುಣವಾಗಿ
ವಿದ್ಯಾರ್ಥಿಗಳ ಫಲಿತಾಂಶದ ವಿವರಗಳು - ಪ್ರತಿ ಕಾಲೇಜಿನಲ್ಲಿ ಶೈಕ್ಷಣಿಕ ವರ್ಷಗಳಿಗೆ ಅನುಗುಣವಾಗಿ
ಅಧ್ಯಾಪಕರು ಮತ್ತು ಸಿಬ್ಬಂದಿ ಕುರಿತ ಮಾಹಿತಿ -  ಪ್ರತಿ ಕಾಲೇಜಿನಲ್ಲೂ ವೈಯಕ್ತಿಕ, ಸೇವಾ ಮತ್ತು ಶೈಕ್ಷಣಿಕ ವಿವರಗಳ ಕುರಿತ ಮಾಹಿತಿ
ಪ್ರತಿ ಕಾಲೇಜಿನ ಪ್ರತಿಯೊಬ್ಬ ಅಧ್ಯಾಪಕರ ಕಾರ್ಯಭಾರ ಕುರಿತ ಮಾಹಿತಿ
ಅಧ್ಯಾಪಕರ ಕಾರ್ಯಭಾರ ನಿರ್ವಹಣಾ ವ್ಯವಸ್ಥೆ
ತರಗತಿ ಕಾರ್ಯ ನಿರ್ವಹಣೆ _ ವೇಳಾಪಟ್ಟಿಗೆ ಅನುಗುಣವಾಗಿ ತರಗತಿಗಳನ್ನು ತೆಗೆದುಕೊಳ್ಳದ ಅಧ್ಯಾಪಕರ ವಿವರ - ಕಾರಣಗಳೊಂದಿಗೆ
ಅಧ್ಯಾಪಕರು ತೆಗೆದುಕೊಂಡ ವಿಶೇಷ ತರಗತಿಗಳ ಕುರಿತ ವಿವರ
ಅತಿಥಿ ಉಪನ್ಯಾಸಕರ ಆಯ್ಕೆ ಮತ್ತು ನಿರ್ವಹಣೆ - ಪ್ರದೇಶವಾರು, ಕಾಲೇಜುವಾರು ಪ್ರತಿಯೊಬ್ಬ ಅತಿಥಿ ಉಪನ್ಯಾಸಕರಿಗೆ ನಿಗದಿಪಡಿಸಿರುವ ಕಾರ್ಯ ಮತ್ತು ಮಾಸಿಕ ಗೌರವಧನದ ಅಂದಾಜಿನೊಂದಿಗೆ


ಕಾಲೇಜುಗಳಿಂದ ಕೆಳಕಂಡ ಮಾಹಿತಿಯನ್ನು EMIS ಮೂಲಕ ಸಂಗ್ರಹಿಸಲು ಕೋಶಗಳನ್ನು ಸಿದ್ಧಪಡಿಸಿ, ಬಳಕೆಗೆ ಲಭ್ಯಗೊಳಿಸಲಾಗಿದೆ.

ಕಾಲೇಜುಗಳಲ್ಲಿನ ಮೂಲಭೂತ ಸೌಕರ್ಯಗಳ ಕುರಿತು ವಿವರಗಳು - ಕಟ್ಟಡ, ಗ್ರಂಥಾಲಯ, ಪ್ರಯೋಗಾಲಯ, ತರಗತಿ ಕೊಠಡಿಗಳು, ಪೀಠೋಪಕರಣಗಳು, ಕಂಪ್ಯೂಟರ್ಗಳು - ಕಾಲೇಜುವಾರು ವಿವರಗಳನ್ನು ಲಭ್ಯವಾಗುವಂತೆ ಮಾಡಲಾಗಿದೆ.

ಕಾಲೇಜುಗಳ ನ್ಯಾಕ್ ಮೌಲ್ಯಮಾಪನ/ಮರುಮೌಲ್ಯಮಾಪನದ ಸ್ಥಿತಿಗತಿಗಳು ಮತ್ತು ಮಾನ್ಯತೆಯ ಬಗ್ಗೆ ವಿವರಗಳು ಲಭ್ಯವಿದೆ.

ಕಾಲೇಜುಗಳಲ್ಲಿ ಸರ್ಕಾರದಿಂದ ಮಂಜೂರಾದ ಅನುದಾನದ ಸದ್ಬಳಕೆ, ಕೋರಿಕೆಗಳು ತರಿಸಲಾಗುತ್ತಿದೆ.
 
ಎನ್.ಐ.ಸಿ. ಸರ್ವರ್ ಕರ್ನಾಟಕದಲ್ಲಿ ಪ್ರಕಟಿಸಲಾಗಿದೆ
ಬೆಂಗಳೂರು
ರಚನೆ, ವಿನ್ಯಾಸ ಮತ್ತು ನಿರ್ವಹಣೆ
ಮಾಹಿತಿ ತಂತ್ರಜ್ಞಾನ ವಿಭಾಗ, ಆಯುಕ್ತರ ಕಛೇರಿ,
ಕಾಲೇಜು ಶಿಕ್ಷಣ ಇಲಾಖೆ, ಬೆಂಗಳೂರು
ರಚನೆ, ವಿನ್ಯಾಸ ಮತ್ತು ನಿರ್ವಹಣೆ
ಮಾಹಿತಿ ತಂತ್ರಜ್ಞಾನ ವಿಭಾಗ, ಆಯುಕ್ತರ ಕಛೇರಿ,
ಕಾಲೇಜು ಶಿಕ್ಷಣ ಇಲಾಖೆ, ಬೆಂಗಳೂರು
© ಕಾಲೇಜು ಶಿಕ್ಷಣ ಇಲಾಖೆ, ಬೆಂಗಳೂರು - 560 001, ಕರ್ನಾಟಕ ಸರ್ಕಾರ, ಭಾರತ.